ಕ್ರೀಡೆಗಳು

 ಎಂಬುದು ಸಂಘಟಿತ, ಸ್ಪರ್ಧಾತ್ಮಕ, ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ. ಇದರಲ್ಲಿ ವಿಜೇತನನ್ನು ವಸ್ತುನಿಷ್ಠ ಮಾರ್ಗಗಳಿಂದ ವ್ಯಾಖ್ಯಾನಿಸಬಹುದು. ಇದನ್ನು ನಿಯಮಗಳ ಅಥವಾ ವಾಡಿಕೆಗಳ ಶ್ರೇಣಿಯಿಂದ ನಡೆಸಲಾಗುತ್ತದೆ. ಕ್ರೀಡೆಯಲ್ಲಿ ಫಲಿತಾಂಶವನ್ನು(ಗೆಲುವುಅಥವಾ ಸೋಲು) ನಿರ್ಧರಿಸುವಾಗ ದೈಹಿಕ ಸಾಮರ್ಥ್ಯಗಳು ಮತ್ತು ಸ್ಪರ್ಧಿಯ ಕೌಶಲಗಳು ಪ್ರಮುಖ ಅಂಶಗಳಾಗುತ್ತವೆ. ದೈಹಿಕ ಚಟುವಟಿಕೆ ಜನರ, ಪ್ರಾಣಿಗಳ ಮತ್ತು/ಅಥವಾ ಚೆಂಡುಗಳು ಮತ್ತು ಯಂತ್ರಗಳಂತಹ ವಿವಿಧ ವಸ್ತುಗಳ ಚಲನೆಯನ್ನು ಒಳಗೊಂಡಿರುತ್ತದೆ. ಇದಕ್ಕೆ ವಿರುದ್ಧವಾಗಿ ಇಸ್ಪೀಟೆಲೆಗಳ ಆಟ ಮತ್ತು ಬೋರ್ಡ್ ಆಟದಂತ ಆಟಗಳನ್ನು ಮನಸ್ಸಿಗೆ ಸಂಬಂಧಿಸಿದ ಕ್ರೀಡೆಗಳೆಂದು ಕರೆದರೂ ಹಾಗು ಕೆಲವನ್ನು ಒಲಿಂಪಿಕ್ ಕ್ರೀಡೆಗಳೆಂದು ಗುರುತಿಸಿದರೂ ಇವು ಕೇವಲ ಬುದ್ಧಿಶಕ್ತಿಯ ಕೌಶಲಗಳನ್ನು ಅಪೇಕ್ಷಿಸುತ್ತವೆ. ಜಾಗಿಂಗ್ ಮತ್ತು ಬೆಟ್ಟ ಹತ್ತುವಂತಹ ಸ್ಪರ್ಧಾತ್ಮಕವಲ್ಲದ ಚಟುವಟಿಕೆಗಳನ್ನು ಸಾಮಾನ್ಯವಾಗಿ ಮನರಂಜನೆಗಳು ಎಂದು ವರ್ಗೀಕರಿಸಲಾಗುವುದು.

ಬಾಲ್ಯದಲ್ಲಿ ಕ್ರೀಡೆ. ಮೇಲೆ ತೋರಿಸಿರುವ ಫುಟ್ ಬಾಲ್ ಒಕ್ಕೂಟ, ಸಾಮಾಜಿಕ ಕಾರ್ಯಗಳನ್ನು ಕೂಡ ಒದಗಿಸುವ ತಂಡದ ಆಟವಾಗಿದೆ.

ಗೋಲುಗಳನ್ನು ಸ್ಕೋರ್ ಮಾಡುವ ಅಥವಾ ಗೆರೆಯನ್ನು ಮೊದಲು ದಾಟುವಂತಹ ದೈಹಿಕ ಪಂದ್ಯಗಳು ಕ್ರೀಡೆಯ ಫಲಿತಾಂಶವನ್ನು ನಿರ್ಧರಿಸುತ್ತವೆ. ಆದರೂ, ಡೈವಿಂಗ್ , ಕುದುರೆ ತರಬೇತಿ ಮತ್ತು ಫಿಗರ್ ಸ್ಕೇಟಿಂಗ್ ನಂತಹ ಕೆಲವು ಕ್ರೀಡೆಗಳಲ್ಲಿ ಕೌಶಲದ ಮಟ್ಟವನ್ನು ಉತ್ತಮವಾಗಿ ನಿರ್ಧರಿಸಲಾದ ಮಾನದಂಡಕ್ಕೆ ಅನುಗುಣವಾಗಿ ನಿರ್ಣಯಿಸಲಾಗುತ್ತದೆ. ಸೌಂದರ್ಯ ಸ್ಪರ್ಧೆ ಮತ್ತು ಶರೀರವರ್ಧನೆ ಪ್ರದರ್ಶನಗಳಂತಹ ಫಲಿತಾಂಶ ನಿರ್ಣಯಿಸುವ ಇತರ ಚಟುವಟಿಕೆಗಳಿಗೆ ಇದು ತದ್ವಿರುದ್ಧವಾಗಿರುತ್ತದೆ. ಈ ಚಟುವಟಿಕೆಗಳಲ್ಲಿ ಕೌಶಲವನ್ನು ತೋರಿಸಬೇಕಿಲ್ಲ ಮತ್ತು ಮಾನದಂಡವನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ.

ಸೋಲನ್ನು ಮತ್ತು ಸಾಧನೆಗಳನ್ನು ಕ್ರೀಡಾ ವಾರ್ತೆಯಲ್ಲಿ ವ್ಯಾಪಕವಾಗಿ ಪ್ರಸಾರಮಾಡುವಾಗ ಅತ್ಯಂತ ದೊಡ್ಡ ಮಟ್ಟದಲ್ಲಿ ಬಹುಪಾಲು ಕ್ರೀಡೆಗಳ ನಿಖರವಾದ ದಾಖಲೆಗಳನ್ನು ಇಡಲಾಗುತ್ತದೆ ಮತ್ತು ಪರಿಷ್ಕರಿಸಲಾಗುತ್ತದೆ. ಕ್ರೀಡೆಗಳನ್ನು ಹೆಚ್ಚಾಗಿ ಮೋಜಿಗಾಗಿ ಅಥವಾ ಉತ್ತಮ ದೈಹಿಕ ಸ್ಥಿತಿಯಲ್ಲಿರಲು ಜನರಿಗೆ ವ್ಯಾಯಾಮ ಬೇಕೆಂಬ ಸರಳವಾದ ಸತ್ಯಕ್ಕಾಗಿ ಆಡಲಾಗುತ್ತದೆ. ಅದೇನೇ ಆದರೂ, ವೃತ್ತಿಪರ ಕ್ರೀಡೆ ಮನರಂಜನೆಯ ಮುಖ್ಯ ಮೂಲವಾಗಿದೆ.

ಅವುಗಳು ಯಾವಾಗಲೂ ಯಶಸ್ವಿಯಾಗದಿದ್ದರೂ ಕೂಡ ಕ್ರೀಡೆಗಳಲ್ಲಿ ಭಾಗವಹಿಸುವವರು ಉತ್ತಮ ಕ್ರೀಡಾಪಟುತ್ವ ಪ್ರದರ್ಶಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಅಲ್ಲದೇ ಪ್ರತಿಸ್ಪರ್ಧಿಗಳು ಮತ್ತು ಅಧಿಕಾರಿಗಳ ಜತೆ ಗೌರವದಿಂದ ವರ್ತಿಸಬೇಕು ಹಾಗು ಆಟದಲ್ಲಿ ಸೋತಾಗ ಗೆದ್ದವರಿಗೆ ಅಭಿನಂದಿಸಬೇಕೆಂಬ ನಡವಳಿಕೆಯ ನಿಯಮಗಳನ್ನು ಅನುಸರಿಸಬೇಕು.