ಬ್ರಹ್ಮಾಂಡ
- (ಈ ಪುಟ ತಪ್ಪಾಗಿ ಇಂಗ್ಲಿಷ್‍ನ ವಿಶ್ವ-ಯೂನಿವರ್ಸ್‌ಗೆ ಜೋಡಿಸಿದೆ, ಗ್ಯಾಲಾಕ್ಷಿಗೆ Galaxy ಜೋಡಿಸಬೇಕಿತ್ತು)
- ನಾವು ಬ್ರಹ್ಮಾಂಡದ ಬಗೆಗೆ ವೈಜ್ಞಾನಿಕವಾಗಿ ತೀಳಿದುಕೊಳ್ಳುವುದಾದರೆ , ಮೊದಲು ವಿಶ್ವ ಅಥವಾ ಈ ಜಗತ್ತು (ಯೂನಿವರ್ಸ್). ಬ್ರಹ್ಮಾಂಡ ಅಥವಾ ನೀಹಾರಿಕೆ (ಗ್ಯಾಲಾಕ್ಸಿ/ಗೆಲಾಕ್ಸಿಗಳು), ನಮ್ಮ ಬ್ರಹ್ಮಾಂಡ ಅಥವಾ ಆಕಾಶ ಗಂಗೆ (ಮಿಲ್ಕೀ ವೇ) ಇವುಗಳ ವೈಜ್ಞಾನಿಕ ವ್ಯಾಖ್ಯೆ ಅಗತ್ಯ. ಬ್ರಹ್ಮಾಂಡವನ್ನು ವಿಶ್ವ ಅಥವಾ ಜಗತ್ತು ಎಂದು ತಪ್ಪು ತಿಳಿಯುವ ಸಾಧ್ಯತೆ ಇದೆ. ನಾವು ಹಾಲಿ ಇರುವ ಈ ಬ್ರಹ್ಮಾಂಡವು ವಿಶಾಲ ವಿಶ್ವದಲ್ಲಿ ಇರುವ ಲಕ್ಷ ಲಕ್ಷ ಬ್ರಹ್ಮಾಂಡಗಳಲ್ಲಿ ಒಂದು. ವಿಶ್ವವೆಂದರೆ ಹಾಗೆ ಲಕ್ಷ-ಕೋಟಿ ಬ್ರಹ್ಮಾಂಡಗಳನ್ನು ಹೊಟ್ಟೆಯಲ್ಲಿ ತುಂಬಿಕೊಂಡ ಊಹಿಸಲೂ ಅಗದಷ್ಟು ದೊಡ್ಡ ಜಗತ್ತು. ರಾತ್ರಿ ಆಕಾಶ ಶುಭ್ರ ವಾಗಿದ್ದಾಗ ಮೇಲಕ್ಕೆ ನೋಡಿದರೆ ಒಂದು ತಿಳಿ ಬಿಳಿಯ ಮೋಡದ ಸೆಲೆ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಿದಂತೆ ಕಾಣುವುದು. ಅದು ವಾಸ್ತವವಾಗಿ ಮೋಡವಲ್ಲ ಅದೇ ನಮ್ಮ ಆಕಾಶ ಗಂಗೆಯೆಂಬ ಬ್ರಹ್ಮಾಂಡದ (ಗ್ಯಾಲಾಕ್ಷಿ) ಪಾರ್ಶ್ವ ನೋಟ. ನಾವು ಅದರೊಳಗೇ ಒಂದು ಬದಿಯಲ್ಲಿದ್ದು ಅದನ್ನು ನೋಡುತ್ತಿದ್ದೇವೆ. ಇಂಗ್ಲಿಷಿನಲ್ಲಿ ಇದನ್ನು ಮಿಲ್ಕಿ ವೇ (ಕ್ಷೀರಪಥ) ಎನ್ನುವರು.
- ನಮ್ಮ ಬ್ರಹ್ಮಾಂಡ, ಆಕಾಶಗಂಗೆ, ಕ್ಷೀರಪಥ, ಮಿಲ್ಕೀ ವೇ, ನಮ್ಮ ನೀಹಾರಕ(ನೀಹಾರಿಕೆ) ಎಂದಾಗಲೆಲ್ಲಾ, ನಾವು ಮತ್ತು ನಮ್ಮ ಸೂರ್ಯಮಂಡಲ ಇರುವ ಈ ನಕ್ಷತ್ರ ಲೋಕಕ್ಕೇ ಹೇಳುವುದು.
- ಈ ನಮ್ಮ ಒಂದು ಮಧ್ಯಮ ಗಾತ್ರದ ಬ್ರಹ್ಮಾಂಡದ ಅಗಾಧತೆ ಅಧ್ಭುತವಾದುದು. ನಮ್ಮ ಭೂಮಿ ಮತ್ತು ಇತರ ಗ್ರಹಗಳ ಕುಟುಂಬವನ್ನು ಹೊಂದಿದ ಸೂರ್ಯ ಮಧ್ಯಮ ಗಾತ್ರದ ನಕ್ಷತ್ರ. ಈ ಆಕಾಶಗಂಗೆಯೆಂಬ ಬ್ರಹ್ಮಾಂಡದಲ್ಲಿ ಎಷ್ಟು ನಕ್ಷತ್ರಗಳಿರಬಹುದೆಂದು ಸಾಕಷ್ಟು ಕರಾರುವಾಕ್ಕಾಗಿ ಊಹಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ . ವಿಜ್ಞಾನಿ ಎಡ್ವಿನ್ ಹಬಲ್ ನು ಈ ವಿಶ್ವದಲ್ಲಿರುವ ಸುಮಾರು 200 ಬಿಲಿಯನ್ (20,000 ಕೋಟಿ ನೀಹಾರಿಕೆ)ಬ್ರಹ್ಮಾಂಡ ವಿರುವುದೆಂದು ಹೇಳಿದ್ದಾನೆ. ಬ್ರಹ್ಮಾಂಡಗಳಲ್ಲಿ ನಮ್ಮ ಆಕಾಶಗಂಗೆಯೂ ಒಂದು ಎಂದು ಲೆಕ್ಕ ಹಾಕಿದ್ದಾನೆ. ಈ ಸಂಖ್ಯೆಯ ಬಗೆಗೆ ಸ್ವಲ್ಪ ವಿವಾದವಿದ್ದರೂ ಬಹುಮಟ್ಟಿಗೆ ಅದು ಸರಿ ಎಂದು ಅನೇಕ ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.
- ನಮ್ಮ ಆಕಾಶಗಂಗೆಯಲ್ಲಿ ಬ್ರಹ್ಮಾಂಡ)ದಲ್ಲಿ ಸುಮಾರು ೨೦೦ರಿಂದ ೪೦೦ ಶತಕೋಟಿ ನಕ್ಷತ್ರಗಳೂ ಸುಮಾರು ೧೦೦ ಶತಕೋಟಿ ಗ್ರಹಗಳೂ ಇವೆ ಎಂದು ಊಹಿಸಿದ್ದಾರೆ. (The Milky Way contains between 200 and 400 billion stars and at least 100 billion planets)
0 Comments