ಕರ್ನಾಟಕ ಸಂಗೀತ
ಪರಿಕಲ್ಪನೆಗಳು
ಶ್ರುತಿ • ಸ್ವರ • ರಾಗ • ತಾಳ • ಮೇಳಕರ್ತ • ಅಸಂಪೂರ್ಣ ಮೇಳಕರ್ತ
Compositions
ವರ್ಣಂ • ಕೃತಿ • ಗೀತಂ • ಸ್ವರಜತಿ • ರಾಗಂ ತಾನಂ ಪಲ್ಲವಿ • ತಿಲ್ಲಾನ
ಸಂಗೀತೋಪಕರಣಗಳು
ಮಾಧುರ್ಯ: ಸರಸ್ವತಿ ವೀಣ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್
ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಖಂಜೀರ • ತವಿಲ್
ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ
ಸಂಗೀತಕಾರರು
ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು
ಕರ್ನಾಟಕ ಸಂಗೀತ
(ಸಂಸ್ಕೃತ: कर्णाटक संगीतम्) ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ ಹಿಂದೂ ದೇವ-ದೇವತೆಗಳನ್ನು ಕುರಿತವು. ಜಾತ್ಯತೀತ ರಚನೆಗಳು ಸಾಮಾನ್ಯವಾಗಿ ಹಾಸ್ಯಪ್ರಧಾನ, ಮಕ್ಕಳ ಹಾಡುಗಳು, ಇಲ್ಲವೇ ಚಿತ್ರಗೀತೆಗಳು. ಭಾರತೀಯ ಸಂಗೀತದ ಎಲ್ಲ ಮುಖ್ಯ ಪದ್ಧತಿಗಳಂತೆ, ಕರ್ನಾಟಕ ಸಂಗೀತದ ಎರಡು ಪ್ರಧಾನ ಅಂಶಗಳೆಂದರೆ ರಾಗ (ಶ್ರುತಿಗೆ ಸಂಬಂಧಪಟ್ಟದ್ದು) ಮತ್ತು ತಾಳ(ಸಂಗೀತ) (ಲಯಕ್ಕೆ ಸಂಬಂಧಪಟ್ಟದ್ದು).
0 Comments